ಕಿಚ್ಚ ಸುದೀಪ್​ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ TA ಶರವಣ

author-image
Veena Gangani
Updated On
ಕಿಚ್ಚ ಸುದೀಪ್​ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ TA ಶರವಣ
Advertisment
  • ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ನಟ ಕಿಚ್ಚ ಸುದೀಪ್​
  • ನಟ ಕಿಚ್ಚ ಸುದೀಪ್​ ಧೈರ್ಯ ತುಂಬಿದ ರಾಜಕೀಯ ಗಣ್ಯರು
  • ಟ್ವೀಟ್​ ಮಾಡುವ ಮೂಲಕ ಗಟ್ಟಿಯಾಗಿ ಇರಿ ಎಂದ TA ಶರವಣ

ಬೆಂಗಳೂರು: ಸ್ಯಾಂಡಲ್​ವುಡ್​ ಖ್ಯಾತ​ ನಟ ಕಿಚ್ಚ ಸುದೀಪ್​ ತಾಯಿ ನಿಧನರಾಗಿದ್ದಾರೆ. ಸುದೀಪ್​ ತಾಯಿ ಸರೋಜರವರು ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಉಸಿರು ನಿಲ್ಲಿಸಿದ್ದಾರೆ. ಹೀಗಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ: ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿಯನ್ನು ತಬ್ಬಿ ಅತ್ತ ಸುದೀಪ್​.. ಅಮ್ಮನನ್ನು ಕಳೆದುಕೊಂಡ ಮಾಣಿಕ್ಯ

publive-image

ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಿಚ್ಚ ಸುದೀಪ್​ ತಾಯಿ ಇಂದು ಬೆಳಗ್ಗೆ 7:04 ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಇನ್ನೂ ನಟ ಸುದೀಪ್​ ಅವರ ತಾಯಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಯಾಂಡಲ್​ವುಡ್​ ನಟ ಹಾಗೂ ನಟಿಯರು, ರಾಜಕೀಯ ಗಣ್ಯರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಇದರ ಜೊತೆಗೆ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಟ್ವೀಟ್​​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.


">October 20, 2024

ಈ ಬಗ್ಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡ ಅವರು, ಸರೋಜಾ ಅಮ್ಮನವರ ನಿಧನಕ್ಕೆ ಕಿಚ್ಚ ಸುದೀಪ್​ ಸರ್ ಮತ್ತು ಕುಟುಂಬದವರಿಗೆ ಹೃದಯಪೂರ್ವಕ ಸಂತಾಪಗಳು. ಗಟ್ಟಿಯಾಗಿ ಇರಿ ಸರ್ ಅಂತ ಧೈರ್ಯ ತುಂಬಿದ್ದಾರೆ. ಇಂದು ಸಂಜೆ 7 ಗಂಟೆಗೆ ವಿಲ್ಸನ್ ಗಾರ್ಡನ್​ನಲ್ಲಿ ಸುದೀಪ್ ತಾಯಿಯ ಅಂತ್ಯಕ್ರಿಯೆ ನೆರವೇರಿದೆ. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸಂಪ್ರದಾಯದಂತೆ ಪೂಜೆ ಮಾಡಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸುದೀಪ್ ಹಾಗೂ ಕುಟುಂಬಸ್ಥರು ತಾಯಿಗೆ ಅಂತಿಮ ವಿದಾಯ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment